`ಕೊಳ್ಳೆಗಾಲದ` ಹಾಡು
Posted date: 17 Wed, Jun 2015 – 09:46:38 AM
ಎ ಫ಼್ರೇಂ ಟು ಮೂವೀಸ್ ಲಾಂಛನದಲ್ಲಿ ನಾಗರಾಜು, ರಘುರಾಜು ಹಾಗೂ ಸುರೇಶ್‌ಬಾಬು ಅವರು ನಿರ್ಮಿಸುತ್ತಿರುವ ‘ಕೊಳ್ಳೆಗಾಲ ಚಿತ್ರದ ‘ಕೊಳ್ಳೆಗಾಲ ಕಾಲುಸೂಪು ತಿನಿಸೋಕೆ ನಾ ಬಂದೆ ಇಲ್ಲಿ ಎಂಬ ಹಾಡಿನ ಚಿತ್ರೀಕರಣ ರಾಕ್‌ಲೈನ್ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್‌ನಲ್ಲಿ ನದೆದಿದೆ. ಸುಚೀಂದ್ರ ಪ್ರಸಾದ್, ಆಲಿಶಾ ಹಾಗೂ ಶ್ರೀನಿವಾಸ್ ಅಭಿನಯಿಸಿದ್ದ ಈ ಹಾಡಿಗೆ ಶಂಕರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ವೆಂಕಟೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಂದೀಪ್ ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವೆಂಕಟೇಶ್, ಕಿರಣ್ ಗೌಡ, ಧರ್ಮತೇಜ್, ದೀಪಗೌಡ, ಸುಚೀಂದ್ರ ಪ್ರಸಾದ್, ಮೈಕೋ ನಾಗರಾಜ್, ಬ್ಯಾಂಕ್ ಜನಾರ್ದನ್, ಕರಿಸುಬ್ಬು, ಆಲಿಶಾ ಮುಂತಾದವರಿದ್ದಾರೆ.
 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed